Friday, April 11, 2014

ಮತ್ತೇ ನೆನಪಾಗದಿರು

ನೆನಪೇ ನೆನಪಾಗದಿರು ಮತ್ತೆ
ಬಂದರೆ ಹಿಂಬಾಲಿಸಿ 
ಬಿಡದೆ ಬೆನ್ನಟ್ಟಿ ದಾರಿ
ನೆನಪಿರದ ಕಾಡಿಗೆ ಬಿಟ್ಟು ಬರುವೆ...

ಒಹ್ ನೆನಪೇ ನೆನಪಾಗದಿರು ಮತ್ತೆ
ಕಲ್ಲು ಕಟ್ಟಿ ಮತ್ತೆಂದೂ
ಮೇಲೆದ್ದು ಮರಳುವ ದಾರಿಗೆ
ಬೆಳಕಿಲ್ಲದ ಬಾವಿಗೆ ನೂಕಿ ಬಿಡುವೆ

ನೆನಪೇ ನೆನಪಾಗದಿರು ಮತ್ತೆ ಮತ್ತೆ
ಕೈಯಲಿರುವ ನೆನಪ ಕಸಿದು
ಹರಿದು ಸುಟ್ಟು ಬೂದಿ
ಹೊರ ಹಾರದಂತೆ ಹೂತಿಡುವೆ  

ನಿನ್ನನೇನು ಮಾಡಿದೆನೆಂಬ ಸತ್ಯದ
ಉಸಿರ ಹಿಸುಕಿ ಕಣ್ಣು ಮುಚ್ಚಿ ಹೂತು
ಮರಳಿ ನೆನಪಾಗದಂತೆ ಮರೆತುಬಿಡುವೆ
ಒಹ್ ನೆನಪೇ ! ಮರಳಿ ನೆನಪಾಗದಿರು ಮತ್ತೆ ಅರಳಿ...
--
ಪ್ರೀತಿಯಿಂದ ,
ಪ್ರಿತಿಗಾಗಿ.......,
ಪ್ರಿತಿಗೊಸ್ಕರ...........
ಪ್ರೀತಿಯನ್ನು ...............
ಪ್ರೀತಿಸುತ್ತಾ ...................
ಹೋದಂತೆಲ್ಲಾ ಬಿರುಗಾಳಿಗೆ ಸಿಕ್ಕ ಎಲೆಯಂತಾಗಿದ್ದೇನೆ .....
ಕನ್ನಡಿಗ ವಿಜಯ್( ಕವಿ) ಹೆಮ್ಮರಗಾಲ

Wednesday, April 2, 2014

ಕೌಂಡಿನ್ಯ ಮಹಾಕ್ಷೇತ್ರ ಸಂತಾನ ವೇಣುಗೋಪಾಲ ಸ್ವಾಮಿ ದೇವಸ್ಥಾನ ಹೆಮ್ಮರಗಾಲ.

ಕೌಂಡಿನ್ಯ ಮಹಾಕ್ಷೇತ್ರ ಸಂತಾನ ವೇಣುಗೋಪಾಲ ಸ್ವಾಮಿ  ದೇವಸ್ಥಾನ ಹೆಮ್ಮರಗಾಲ. ನಂಜನಗೂಡಿನಿಂದ 14.ಕಿ.ಮೀ. ದೂರದಲ್ಲಿರುವ ಹೆಮ್ಮರಗಾಲ ಗ್ರಾಮ  `ಕೌಂಡಿನ್ಯ ಮಹಾಕ್ಷೇತ್ರ`...