Friday, May 9, 2014

ಪ್ರೀತಿ ಮೊಳಕೆಯೊಡೆಯಲು ಎಷ್ಟು ಹೊತ್ತು...?


ಅವಳ ಕಣ್ಣ ಬೆಳಕಿನಲ್ಲಿ
ಫಳಕ್ಕನೆ ಹೊಳೆವ ಮಿಂಚಿತ್ತು
ಚಿಗರೆನಡಿಗೆಯ ಹುಡುಗಿ
ಮಾತು ಮಾತಿಗೂ ನಗೆ ಉಕ್ಕಿಸಿದಾಗ
ಹಾಲುಬೆಳದಿಂಗಳು
ಹರಿದ ಹಾಗಿತ್ತು.

 ಅವಳೊಳಗೆ
ಇನ್ನೂ ಮರಿಯಾಗದೆ
ಕಾವಿಡುವ ಮೊಟ್ಟೆಯಂತೆ
ಪ್ರೀತಿ ಬೆಚ್ಚಗಿತ್ತು.
ಯಾವ ಮಾಯದಲ್ಲೋ ನಾನು
ಅದನ್ನು ಮೆತ್ತಗೆ ತಟ್ಟಿದೆ.
ಮೊಟ್ಟೆ ಮರಿಯಾಗಲು
ಎಷ್ಟು ಹೊತ್ತು..?

ಅಲ್ಲೀಗ ಪುಟ್ಟ ಮರಿಗಳ ಕಲರವ
ಈಗ ಎಲ್ಲೆಲ್ಲೂ ಕನಸುಗಳ ಹೂ ಗೊಂಚಲು.
ಎಲೆ ಎಲೆಗೂ ತೊಟ್ಟಿಕ್ಕುವ ಹನಿ
ಅವರ ಕಾಲಡಿಯಲ್ಲಿ
ಇಡೀ ಜಗತ್ತು ಉರುಳಿಕೊಂಡಿದೆ ನೋಡಿ.

ಅವಳ ಕಣ್ಣ ಕೆಳಗಿನ ಕಪ್ಪು ತಿದ್ದಿ
ಬಿಳಿಗೂದಲೂ ಹರಿದು
ಕನ್ನಡಿಗೆ ಹೆದರುವ ಕಾಲಕ್ಕೆ
ಉದ್ದೋ ಉದ್ದ ಮಲಗಿದ ರಸ್ತೆಗಳು
ಮನೆಗೆ ಬಂದು ಉಸ್ಸೆಂದು ..!
ಕಾಲು ಚಾಚಿದರೆ
ಹಗಲಿಗೆ ವಿದಾಯ

 ನಿನ್ನ ದಮ್ಮಯ್ಯ
ಹಿಂದೆ ಹಿಂದೆ ಹೆಜ್ಜೆಹಾಖಿ ಓಡಲಾರೆ
ಕತ್ತು ತಿರುಗಿಸಿ ಹಿಂದಕ್ಕೂ ನೋಡಲಾರೆ ಎಲ್ಲ ಮರೆತು ಹೋಗಿದೆ.
ಈಗಿನದಷ್ಟೇ ಈಗ ನಿಜ
ಎದೆಯಲ್ಲಿ ಈಗಲೂ ಇರಬಹುದು
ಒಸರುವ ಹಸಿ ಜಾಗ
ಸ್ವಲ್ಪ ಚುಚ್ಚಿದರೂ ಚಿಮ್ಮಬಹುದು
ನೂರುಭಾವಗಳ ರಾಗ

ಪ್ರೀತಿಯಿಂದ ಪ್ರೀತಿಗಾಗಿ
"........" & "........" ?
ಕವಿ ,ಕನ್ನಡಿಗ ವಿಜಯ್ ಜಿ. ಹೆಮ್ಮರಗಾಲ

No comments:

Post a Comment

ಕೌಂಡಿನ್ಯ ಮಹಾಕ್ಷೇತ್ರ ಸಂತಾನ ವೇಣುಗೋಪಾಲ ಸ್ವಾಮಿ ದೇವಸ್ಥಾನ ಹೆಮ್ಮರಗಾಲ.

ಕೌಂಡಿನ್ಯ ಮಹಾಕ್ಷೇತ್ರ ಸಂತಾನ ವೇಣುಗೋಪಾಲ ಸ್ವಾಮಿ  ದೇವಸ್ಥಾನ ಹೆಮ್ಮರಗಾಲ. ನಂಜನಗೂಡಿನಿಂದ 14.ಕಿ.ಮೀ. ದೂರದಲ್ಲಿರುವ ಹೆಮ್ಮರಗಾಲ ಗ್ರಾಮ  `ಕೌಂಡಿನ್ಯ ಮಹಾಕ್ಷೇತ್ರ`...